Press Statement
AMUCT Supports DK Bandh
Association of Mangalore University College Teachers (AMUCT) extends total support for the Dakshina Kannada Bandh call given on 3-3-2014 opposing the Ettina Hole Project. Dakshina Kannada has set a model for the state and the country for socio-economic transformation in recent years. But unfortunately, the district has become a dumping yard with several projects not conducive for a sustainable growth. Now, there is an attempt to divert the river Netravati which is life blood for people in Dakshina Kannada. AMUCT appeals to the State Government not to test the patience of cultured people of DK with such misadventures and to immediately shelve the project. AMUCT gives a call to everyone in DK to come together for opposing such irrational project.
Dr.Norbert Lobo Mr.K.V.Purushothama
President Gen.Secretary
ಪತ್ರಿಕಾ ಪ್ರಕಟಣೆ
ದಕ್ಷಿಣ ಕನ್ನಡ ಬಂದ್ ಗೆ ಅಮುಕ್ತ್ ಬೆಂಬಲ
ಎತ್ತಿನ ಹೊಳೆ ಯೋಜನೆ ವಿರೋಧಿಸಿ ೩-೩-೨೦೧೪ ರಂದು ನೀಡಿರುವ ದ.ಕ.ಬಂದ್ ಕರೆಗೆ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿ ಕಾಲೇಜು ಶಿಕ್ಷಕರ ಸಂಘಟನೆ (ಅಮುಕ್ತ್) ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದೆ. ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಇಡೀ ರಾಜ್ಯಕ್ಕೆ ಮಾದರಿಯಾಗಿರುವ ದಕ್ಷಿಣ ಕನ್ನಡ ಜನತೆ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಬಲವಂತವಾಗಿ ಹೇರುತ್ತಿರುವ ಅನೇಕ ಮಾರಕ ಯೋಜನೆಗಳಿಂದ ತಲ್ಲಣಗೊಂಡಿದೆ. ಈಗ ಜೀವ ನದಿ ನೇತ್ರಾವತಿಯನ್ನೇ ನಾಶ ಮಾಡುವ ಇಂತಹ ಯೋಜನೆಗಳನ್ನು ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಪ್ರಜ್ಞಾವಂತ ಜನತೆಯ ಸಹನೆಯನ್ನು ಪರೀಕ್ಷಿಸುವ ದುಸ್ಸಾಹಸ ಮಾಡಬಾರದು ಹಾಗೂ ಈ ಯೋಜನೆಯನ್ನು ಕೈ ಬಿಡಬೇಕು ಎಂದು ಅಮುಕ್ತ್ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ. ಈ ಯೋಜನೆಯನ್ನು ವಿರೋಧಿಸುವಲ್ಲಿ ದಕ್ಷಿಣ ಕನ್ನಡ ಜನತೆ ಒಂದಾಗಬೇಕು ಎಂದು ಅಮುಕ್ತ್ ವಿನಂತಿಸುತ್ತದೆ.
ಡಾ.ನಾರ್ಬರ್ಟ್ ಲೋಬೊ ಕೆ.ವಿ.ಪುರುಷೋತ್ತಮ
ಅಧ್ಯಕ್ಷ ಪ್ರ. ಕಾರ್ಯದರ್ಶಿ