ಪತ್ರಿಕಾ ಫ್ರಕಟಣೆ
ಮಂಗಳೂರು: ಕಾಲೇಜು ಶಿಕ್ಷಣ ಇಲಾಖೆ, ರಾಜ್ಯದ ಸರ್ಕಾರಿ / ಖಾಸಗಿ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕರು ೨೨ (ಪ್ರಾಯೋಗಿಕರಹಿತ ವಿಷಯಗಳು) ಮತ್ತು ೨೬ (ಪ್ರಾಯೋಗಿಕಸಹಿತ) ಗಂಟೆಗಳ ಬೋಧನಾ ಕಾರ್ಯಭಾರ ನಿರ್ವಹಿಸಲು ಸುತ್ತೋಲೆ ನೀಡಿದೆ. ಈ ಸುತ್ತೋಲೆಯನ್ನು ಜಾರಿಗೆ ತಂದಲ್ಲಿ ರಾಜ್ಯಾದಾದ್ಯಾಂತ ಪ್ರಸ್ತುತ ಬೋಧನೆ ಮಾಡುತ್ತಿರುವ ೨೫,೦೦೦ಕ್ಕೂ ಮಿಗಿಲಾಗಿ ಆತಿಥಿ, ತಾತ್ಕಾಲಿಕ ಮತ್ತು ಅನುದಾನರಹಿತ ಬೋಧಕರು ತಮ್ಮ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ.
ವಾಸ್ತವಿಕವಾಗಿಯೂ ೨೨/೨೬ ಗಂಟೆ ಬೋಧನ ಮಾಡಬೇಕಾದರೆ ಪ್ರತಿದಿವಸ ನಿರಂತರವಾಗಿ ೩/೪ ಗಂಟೆಗಳ ಆವಧಿಗೆ ಬೋಧನೆ ಮಾಡಬೇಕಾದ ಇಂತಹ ಆವೈಜ್ಙಾನಿಕ, ಆತಾರ್ಕಿಕ ಮತ್ತು ಆವಾಸ್ತವಿಕ ಸುತೋಲೆಯನ್ನು ವಿರೋಧಿಸಿ ಮಂಗಳೂರು ವಿವಿ ಮಟ್ಟದ ಸಾವಿರಕ್ಕೂ ಹೆಚ್ಚಿನ ಪದವಿ ಕಾಲೇಜು ಶಿಕ್ಷಕರು ನವೆಂಬರ್ ೨೨, ಶುಕ್ರವಾರ, ೨೦೧೪ ಮಧ್ಯಾಹ್ನ ೨.೦೦ ಗಂಟೆಗೆ ಹಂಪನಕಟ್ಟೆ ವಿವಿಕಾಲೇಜು ವಠಾರದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಪ್ರತಿಭಟನೆ ಮರೆವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವರು.
ದಯಮಾಡಿ ಈ ಪತ್ರಿಕಾ ಪ್ರಕಟಣೆಯನ್ನು ಪ್ರಕಟಿಸಲು ಕೋರುತ್ತೇವೆ.
ತಾವೂ ಈ ಪ್ರತಿಭಟನೆ ಕಾರ್ಯಕ್ರಮದ ವರದಿಯನ್ನು ತಮ್ಮ ಪತ್ರಿಕೆ / ಚಾನೇಲ್ / ವೆಬ್ಸೈಟ್ನಲ್ಲಿ ವರದಿ ಮಾಡುವರೆ ತಮ್ಮ ಪತ್ರಿಕ ಪ್ರತಿನಿಧಿಯನ್ನು ಕಳಿಸಬೇಕಾಗಿ ವಿನಂತಿಸುತೇವೆ.
ಡಾ.ನಾರ್ಬರ್ಟ್ ಲೋಬೊ ಲಕ್ಷ್ಮೀನಾರಾಯಣ ಭಟ್
ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ, ಅಮುಕ್ತ್