ಅರ್ಥ ಶಾಸ್ತ್ರಜ್ಞ, ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲರ ಮೂರು ಸಾಹಿತ್ಯ ಕ್ರತಿಗಳು ಇತ್ತೀಚೆಗೆ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಬಿಡುಗಡೆಗೊಂಡವು. ಶಿಸಿಲ ಒಂದು ಹಳ್ಳಿಯ ಕತೆ - ಸಂಕಲನವನ್ನು ಖ್ಯಾತ ಸಂಶೋದಕ ಡಾ. ವಸಂತ ಕುಮಾರ ತಾಳ್ತಾಜೆ; ಕೊಡಗು ಕಥನ ಕಾದಾಂಬರಿಯನ್ನು ಅಡಿಕೆ ತಜ್ಞ, ಡಾ ವಿಘ್ನೇಶ್ವರ ವರ್ಮುಡಿ ಮತ್ತು ನಾಡ್‌ಕಟ್ಟ್‌ಪಾಟ್ ಕಾದಂಬರಿಯನ್ನು ಪ್ರಾಚಾರ್ಯ ಡಾ. ಎಚ್ಚೆಂ ಕುಮಾರಸ್ವಾಮಿ ಬಿಡುಗಡೆ ಮಾಡಿದರು. ಕೊಡಗು ಕಥನ ಕಾದಂಬರಿಯು ಆಕಾಶವಾಣಿ ಮಡಿಕೇರಿಯಿಂದ ಪ್ರತಿ ಭಾನುವಾರ ರಾತ್ರಿ ೭.೫೦ ರಿಂದ ೮.೦೦ ರ ವರೆಗೆ ಧಾರವಾಹಿಯಾಗಿ ಪ್ರಸಾರವಾಗುತ್ತಿದೆ.