ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಿರಿಯ ಗ್ರಂಥಪಾಲಕರಾದ ಶ್ರೀ ಬಿ ಲೋಕನಾಥ ಪೂಜಾರಿಯವರು ದಕ್ಷಿಣ ಕನ್ನಡ ಮತ್ತು ಕೊಡಗು ಗ್ರಂಥಪಾಲಕರ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಜರುಗಿದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಬೆಸೆಂಟ್ ಸಂಧ್ಯಾ ಕಾಲೇಜಿನ ಡಾ. ವಾಸಪ್ಪ ಗೌಡ, ಕಾರ್ಯದರ್ಶಿಯಾಗಿ ಬ್ರಹ್ಮಾವರ ಎಸ್ ಎಂ ಎಸ್ ಕಾಲೇಜಿನ ಕೆ ಗಣಪತಿ ಭಟ್, ಜೊತೆ ಕಾರ್ಯದರ್ಶಿಯಾಗಿ ಕೆ ಎಂ ಸಿ ಯ ಡಾ. ಪೂಜಾ ಹಾಗೂ ಕೋಶಾಧಿಕಾರಿಯಾಗಿ ಶಿರ್ವ ಸೈಂಟ್ ಮೇರೀಸ್ ಕಾಲೇಜಿನ ಶ್ರೀಧರ ಹೆಗಡೆ ಇವರುಗಳು ಆಯ್ಕೆಯಾಗಿದ್ದಾರೆ.