ಮಂಗಳೂರು,27, ಜುಲಾಯಿ, 2013
ಮಂಗಳೂರು ವಿ,ವಿ ಕಾಲೇಜು ಅಧ್ಯಾಪಕರ ಸಂಘ(ಅಮುಕ್ತ್)ದ ವತಿಯಿಂದ ಧಾರವಾಡ ವಲಯದ ಜಂಟಿ ನಿರ್ದೇಶಕರಾಗಿ ವರ್ಗಾವಣೆಗೊಂಡಿರುವ ಮಂಗಳೂರು ವಲಯದ ಜಂಟಿನಿರ್ದೇಶಕರಿಗೆ ಅಭಿನಂದನೆ ಮತ್ತು ಬೀಳ್ಕೊಡುಗೆ ಸಮಾರಂಭವು ಜುಲೈ 27ರಂದು ಮಂಗಳೂರಿನ ಅಮುಕ್ತ್ ಕಛೇರಿಯಲ್ಲಿ ನಡೆಯಿತು.
ಡಾ|ದೇವಾನಂದ ಆರ್ ಗಾಂವ್ಕರ್ ಅವರು ಮಂಗಳೂರು ವಲಯದಲ್ಲಿ ಜಂಟಿ ನಿರ್ದೇಶಕರಾಗಿ ಅಧಿಕಾರದಲ್ಲಿರುವಾಗ ಕಾಲೇಜು ಶಿಕ್ಷಕರ ಹಲವಾರು ಸಮಯಗಳಿಂದ ಪರಿಹಾರವಾಗದೆ ಬಾಕಿ ಉಳಿದಿದ್ದ ಕಡತಗಳನ್ನು ವಿಲೇವಾರಿ ಮಾಡಿ ಶಿಕ್ಷಕರ ಗೌರವಕ್ಕೆ ಪಾತ್ರರಾಗಿದ್ದರು. ಅಮುಕ್ತ್ ಕಛೇರಿಯಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕೂಟದ ಮಾಜಿ ಅಧ್ಯಕ್ಷರಾದ ಡಾ| ಎ.ಎಂ ನರಹರಿಯವರು ಅಭಿನಂದನಾ ಭಾಷಣವನ್ನು ಮಾಡಿದರು. ಅಭಿನಂದನೆಯನ್ನು ಸ್ವೀಕರಿಸಿದ ಗಾಂವ್ಕರ್ರವರು ಶಿಕ್ಷಕರು ಸದಾ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ತಮ್ಮ ಹಕ್ಕುಗಳನ್ನು ನ್ಯಾಯಯುತವಾಗಿ ಪಡೆಯಲು ನಿರಂತರ ಹೋರಾಟ ಅಗತ್ಯ. ಮಂಗಳೂರು ವಲಯದಲ್ಲಿ ಕಾಲೇಜುಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಧಾರವಾಡ ವಿಭಾಗದ ಶಿಕ್ಷಕರಿಗೆ ಅಧ್ಯಯನದ ದೃಷ್ಟಿಯಿಂದ ಈ ವಲಯದ ಕೆಲವು ಆಯ್ದ ಕಾಲೇಜುಗಳನ್ನು ಸಂದರ್ಶಿಸುವ ಅವಕಾಶವನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದರು.ಅಮುಕ್ತ್ ಅಧ್ಯಕ್ಷರಾದ ಡಾ|ನೋರ್ಬಟ್ ಲೋಬೋ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ. ಪುರುಷೋತ್ತಮ ಕೆ.ವಿ ವಂದಿಸಿದರು. ಶ್ರೀ.ಜೋಸ್ಲಿನ್ ಲೋಬೋ ಮತ್ತು ಅಮುಕ್ತ್ನ ಎಲ್ಲಾ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
- ಪುರುಷೋತ್ತಮ ಕೆ.ವಿ